‘ಮಾದಕ ದ್ರವ್ಯ ವ್ಯಸನ’ ವಿಷಯ ಮಂಡನೆ

ದಿನಾಂಕ 12-12-2014 ರ ಶುಕ್ರವಾರದಂದು ವಿವೇಕಾನಂದ ಪದವಿ ಪೂರ್ವಕಾಲೇಜಿನ ಪ್ರಥಮ ಪಿ.ಯು.ಸಿ. ಕಲಾ ವಿಭಾಗದ ವಿದ್ಯಾರ್ಥಿಗಳು ‘ಮಾದಕದ್ರವ್ಯ ವ್ಯಸನ’ ಎಂಬ ವಿಷಯದ ಬಗೆಗೆ ವಿಷಯ ಮಂಡಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜೀವಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀ ಮುರಳಿ ಪಿ.ಜಿ, ಕಾಲೇಜಿನ ಪ್ರಾಂಶುಪಾಲ ಜೀವನ್‌ದಾಸ್ ಎ. ಉಪಸ್ಥಿತರಿದ್ದರು.

‘ಮಾದಕದ್ರವ್ಯ ವ್ಯಸನ’ ಎಂಬ ವಿಷಯದ ಬಗ್ಗೆ ಭರತ್‌ಕುಮಾರ್ ಇವರು ಮಂಡಿಸಿದರು.

‘ಮಾದಕದ್ರವ್ಯ ವ್ಯಸನದಗುಣ-ಲಕ್ಷಣಗಳು ಈ ವಿಷಯದ ಬಗೆಗೆ ನಿತಿನ್ ಸಬಾಸ್ಟಿಯನ್ ಇವರು ಮಂಡಿಸಿದರು.

‘ಮಾದಕದ್ರವ್ಯ ವ್ಯಸನದ ಪ್ರಾಕಾರಗಳು’ ಈ ವಿಷಯವನ್ನು ಅಬ್ದುಲ್ ರಾಜಿಕ್ ಮಂಡಿಸಿದರು.

‘ಮಾದಕದ್ರವ್ಯ ವ್ಯಸನಕ್ಕೆ ಕಾರಣಗಳು’ ಈ ವಿಷಯದ ಬಗ್ಗೆ ದೇಚಮ್ಮ ಮಂಡಿಸಿದರು.

‘ಮಾದಕದ್ರವ್ಯ ವ್ಯಸನ ಸೇವನೆಯ ಮತ್ತು ಕಳ್ಳ ಸಾಗಾಟದ ನಿಯಂತ್ರಣ ಮತ್ತು ಪರಿಹಾರ’ ಈ ವಿಷಯವನ್ನು ಅನುಶ್ರೀ ಮಂಡಿಸಿದರು.

ಕಾರ್ಯಕ್ರಮದ ನಿರೂಪಣೆ ಹಾಗೂ ಪ್ರಾರ್ಥನೆಯನ್ನು ಸಾಯಿಶ್ರೀಪದ್ಮ ಮಾಡಿದರು. ಅತಿಥಿಗಳನ್ನು ನರುನ್ ನಾಚಪ್ಪ ಸ್ವಾಗತಿಸಿ ಪರಿಚಯಿಸಿದರು. ಕೊನೆಯಲ್ಲಿ ಚಿತ್ರಾ ಎನ್. ಧನ್ಯವಾದ ಸಮರ್ಪಣೆ ಮಾಡಿದರು.

Highslide for Wordpress Plugin