“ವಿದ್ಯಾರ್ಥಿಗಳು ಓದಿನ ವಿಷಯದಲ್ಲಿ ಮಾತ್ರ ಪರಿಣಿತರಾಗದೇ ಪಠ್ಯೇತರ ಚಟುವಟಿಕೆಗಳಲ್ಲೂ ಕೂಡ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು, ಈ ಮೂಲಕ ಜ್ಞಾನಾಭಿವೃದ್ಧಿಯಾಗಬೇಕು” ಎಂದು ಖ್ಯಾತ ಯೋಗ ಶಿಕ್ಷಕ ಶ್ರೀ ಜೈರಾಮ ತಿಳಿಸಿದರು.
ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಯೋಗದ ಬಗ್ಗೆ ತರಬೇತಿಯನ್ನು ನೀಡುತ್ತಾ ಮಾತನಾಡಿದ ಅವರು ಮೊಬೈಲ್, ಟಿ.ವಿ ಮುಂತಾದ ಮಾಧ್ಯಮಗಳಿಂದ ವಿದ್ಯಾರ್ಥಿಗಳು ದೂರವಿದ್ದು ಪ್ರತಿದಿನವು ಯೋಗವನ್ನು ಮಾಡುವುದರಿಂದ ಏಕಾಗ್ರತೆ ಬರುವುದರೊಂದಿಗೆ ಮನಸ್ಸನ್ನು ತಿಳಿಯಾಗಿರಿಸಲು ಸಾಧ್ಯ. ಎಂದು ಯೋಗದ ಮಹತ್ವವನ್ನು ತಿಳಿಸಿಕೊಟ್ಟರು.
ವಿವಿಧ ರೀತಿಯ ಯೋಗಾಸನಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿಕೊಟ್ಟರು. ಸಾವಿರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜೀವನ್‌ದಾಸ್ ಇವರು ಉಪಸ್ಥಿತರಿದ್ದರು.