ಗ್ರಾಮವು ವಿಕಸನವಾಗಬೇಕಾದರೆ ಎಲ್ಲರ ಅಳಿಲು ಸೇವೆಯು ಅತ್ಯಗತ್ಯ. ವಿದ್ಯಾರ್ಥಿಗಳಿಗೆ ತರಗತಿಯ ಶಿಕ್ಷಣದ ಜೊತೆಗೆ ಹೊರಗಿನ ಶಿಕ್ಷಣ ನೀಡಿದಾಗ ಮಾತ್ರ ವಿದ್ಯಾರ್ಥಿಗಳ ಜ್ಞಾನ ವಿಕಸನವಾಗಿ ಗ್ರಾಮ ಹಾಗೂ ದೇಶದ ಅಭಿವೃದ್ಧಿಯಾಗುತ್ತದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾದ ಶ್ರೀ ಕೃಷ್ಣ ಭಟ್ ಹೇಳಿದರು.
ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಕಲಾವಿಭಾಗದ ವಿದ್ಯಾರ್ಥಿಗಳು ಮತ್ತು ಬನ್ನೂರು ಗ್ರಾಮಪಂಚಾಯತ್ ಸಹಯೋಗದೊಂದಿಗೆ ಗ್ರಾಮಸ್ಥರೊಂದಿಗೆ ವಿದ್ಯಾರ್ಥಿಗಳು ಎಂಬ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಅವರು ಮಾತನಾಡಿದರು. ಕಾರ್ಯಕ್ರಮವನ್ನು ನ್ಯಾಯವಾದಿ ಶ್ರೀ ವಿಜಯ ನಾರಾಯಣ ವಹಿಸಿದ್ದರು. ನಂತರ ಮಾತನಾಡಿ ಸ್ವಚ್ಛ ಗ್ರಾಮದ ಮಹತ್ವವನ್ನು ವಿವರಿಸಿದರು.
ಸಮಾರಂಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಪೈ, ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ರವೀಂದ್ರ ಪಿ. ಶ್ರೀ ಸಂತೋಷ್, ಶ್ರೀ ರವಿ ಮುಂಗ್ಲಿಮನೆ, ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜೀವನ್‌ದಾಸ್ ಇವರು ಉಪಸ್ಥಿತರಿದ್ದರು. ನಂತರ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಸಂಚಾಲಕರಾದ ಶ್ರೀ ಜಯರಾಮ ಭಟ್ ವಹಿಸಿದ್ದರು. ಯೋಧರಾಗಿ 24 ವರ್ಷಗಳ ಸೇವೆಸಲ್ಲಿಸಿದ ಶ್ರೀ ಹೊನ್ನಪ್ಪ ಗೌಡ ಇವರನ್ನು ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಪುತ್ತೂರಿನ ನಗರ ಸಭೆಯ ಸದಸ್ಯರಾದ ಶ್ರೀ ರಾಮಣ್ಣ ಗೌಡ, ರೈ ಎಸ್ಟೇಟ್‌ನ ಶ್ರೀ ಅಶೋಕ್ ಕುಮಾರ್ ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ಕಲಾವಿಭಾಗದ ವಿದ್ಯಾರ್ಥಿಗಳಾದ ಸುಮ್ಯ ಮತ್ತು ಸಾರ್ಥಕ್ ನಿರ್ವಹಿಸಿದರು. ಕಲಾವಿಭಾಗದ ವಿದ್ಯಾರ್ಥಿನಿ ಚಾಂದಿನಿ ಸ್ವಾಗತಿಸಿ ಸೋನು ಧನ್ಯವಾದವನ್ನು ಸಲ್ಲಿಸಿದರು.